Article by Dr. Arunkumar Jeedi
ಪ್ಲಾಸ್ಟಿಕ್ ಸರ್ಜರಿ ವಿಭಾಗ ಒ೦ದು ಸುಪರ್ ಸ್ಪೆಷಾಲಿಟಿ ವಿಭಾಗವಾಗಿದ್ದು ಸಾಮಾನ್ಯವಾಗಿ ಜನರಲ್ ಸರ್ಜರಿ ಗಿಂತ ಹೆಚ್ಚಿನ ಹುದ್ದೆ ಹಾಗೂ ಜನರು ಸರದಿಯ ನಂತರ ಮಾಡೋ ಕೋರ್ಸ್ ಆಗಿರುತ್ತದೆ.
ಪ್ಲಾಸ್ಟಿಕ್ ( ಪ್ಲಾಸ್ಟಿಕ್ ಸರ್ಜರಿ) ಗ್ರೀಕ್ ಭಾಷೆಯಿಂದ ಪಡೆಯಲಾದ ಶಬ್ದ ಇದರ ಅರ್ಥ ಮರು ರೂಪಿಸುವ ಕಲೆ ಅಥವಾ ಮರು ಜೋಡಿಸುವ ಕಲೆ.
ಭಾರತದಲ್ಲಿ ಸಾಮಾನ್ಯ ಜನರಲ್ಲಿ ಪ್ಲಾಸ್ಟಿಕ್ ಸರ್ಜರಿ ಅಂದರೆ ಪ್ಲಾಸ್ಟಿಕ್ ವಸ್ತು ಎನ್ನುವ ತಪ್ಪು ಕಲ್ಪನೆ ಇದೆ. ಇದರ ಬಗ್ಗೆ ಜನ ಸಾಮಾನ್ಯರಿಗೆ ಸರಿಯಾಗಿ ಅರ್ಥವಾಗದೆ ವಿಭಾಗವಾಗಿದೆ.
ಅದಾಗ್ಯೂ ಪ್ಲಾಸ್ಟಿಕ್ ಸರ್ಜರಿ ವಿಭಾಗವು 1ಮನುಷ್ಯನ ವಿಕಾರತೆಯನ್ನು ಅವನ ಬೇರೆ ಅಂಗಾಂಗವನ್ನು ಉಪಯೋಗಿಸಿ ಮರುರೂಪಿಸುವ ಅಥವಾ ಮರು ಜೋಡಿಸುವ ಸರ್ಜರಿ ಆಗಿರುತ್ತದೆ .
ಪ್ಲಾಸ್ಟಿಕ್ ಸರ್ಜರಿಯ ಅಭಿವದ್ಧಿ ಕಳೆದ 2 ದಶಕಗಳಿಂದ ಹೊಂದುತ್ತಿದೆ ಆದರೆ ಪ್ಲಾಸ್ಟಿಕ್ ಸರ್ಜರಿಯ ಮೂಲ ಇರುವುದು ನಮ್ಮ ಭಾರತದಲ್ಲೇ.
ಸುಶ್ರುತ ಮುನಿ ಕ್ರಿ ಶ 8೦೦ ರಲ್ಲಿ ಕತ್ತರಿಸಿ ವಿಕಾರಗೊಂಡ ಮೂಗಿನ ಆಕಾರವನ್ನು ಸರಿಪಡಿಸುವ ಸರ್ಜರಿಯನ್ನು ಭಾರತದಲ್ಲಿ ಮಾಡಿದ್ದರು ಹೀಗೆ ಪ್ಲಾಸ್ಟಿಕ್ ಸರ್ಜರಿಯ ಬಗ್ಗೆ ಅಪಾರ ಕೊಡುಗೆಯನ್ನು ಪ್ರಪಂಚಕ್ಕೆ ಕೊಟ್ಟಿದ್ದಾರೆ.
ಪ್ಲಾಸ್ಟಿಕ್ ಸರ್ಜರಿ 1ಮುಖ್ಯ ಚಿಕಿತ್ಸೆಯಾಗಿದ್ದು ಇದರಲ್ಲಿ ಅನೇಕ ಉಪವಿಭಾಗಗಳೂ ಇವೆ.
* ಕೈ ಸರ್ಜರಿ
* ಸುಟ್ಟಗಾಯ ಆರೈಕೆ ವಿಭಾಗ
* ರಿಕನ್ ಸ್ಟ್ರಕ್ಟಿವ್ / ಮರುಜೋಡಣೆ ವಿಭಾಗ
* ಮೈಕ್ರೋ ಸರ್ಜರಿ ವಿಭಾಗ
* ಓಂಕಾಪ್ಲಾಸ್ಟಿಕ / ಬಾಯಿ ಕ್ಯಾನ್ಸರ್ ಮರುರೂಪಿಸುವ ವಿಭಾಗ
* ಆರ್ಥೋ ಪ್ಲಾಸ್ಟಿಕ್ / ಕಾಲು ಮರುಜೋಡಣಾ ವಿಭಾಗ
* ಕಾಸ್ಮೆಟಿಕ್ / ಕಾಂತಿವರ್ಧಕ ವಿಭಾಗ
ಕೈ ಸರ್ಜರಿ :
ಒಬ್ಬ ಮನುಷ್ಯನಿಗೆ ಅವನ 1ಅಂಗಾಂಗ ಅಥವಾ ಬೆರಳಿನ ತುದಿ ತುಂಡಾಗಿ ಬೇರ್ಪಟ್ಟಾಗ ಅದು ಒಪ್ಪಲಾಗದ ಅನುಭವ ಇದು ಬಹಳವಾಗಿ ಯಾಂತ್ರೀಕೃತ ಕೈಗಾರಿಕಾ ಗಳಲ್ಲಿ ಅಥವಾ ಮನೆ ಕನಸಲ್ಲಿ ಕಂಡುಬರುವ ಸಮಸ್ಯೆ .
ಯಾವುದೇ ತರಹದ ಕೈಬೆರಳುಗಳ ಗಾಯ ಅಥವಾ ಕತ್ತರಿಸಿದ ಬೆರಳುಗಳ ಮರುಜೋಡಣೆ ಕ್ರಿಯೆ ಅಥವಾ ಜನ್ಮಜಾತ ಕೂಸಿನ ಬೆರಳುಗಳ ವಿರೂಪ ವ್ಯಕ್ತಿಯನ್ನೇ ಅತಿ ಸೂಕ್ಷ್ಮತೆಯಿಂದ ಮರುರೂಪಿಸುವ ಸರ್ಜರಿಯೇ&ಸರ್ಜರಿ ಅಥವಾ ಕೈ ಮರುಜೋಡಣಾ ವಿಭಾಗವಾಗಿರುತ್ತದೆ ಈ ತರಹದ ಪ್ಲಾಸ್ಟಿಕ್ ಸರ್ಜರಿಯಿಂದ ಒಬ್ಬ ಮನುಷ್ಯ ಕಳೆದುಕೊಂಡ ತನ್ನ ದೇಹದ ಭಾಗಗಳನ್ನು ಜೋಡಿಸಿ ಅವನಿಗೆ ಮೊದಲಿನಂತೆ ಸರಿಯಾಗಿ ಕೆಲಸ ಮಾಡುವಂತೆ ಮಾಡುವ ಸರ್ಜರಿ ಆಗಿರುತ್ತದೆ.
ಸುಟ್ಟಗಾಯ ಆರೈಕೆ ವಿಭಾಗ :
ಮೆಡಿಕಲ್ ಮತ್ತು ಸರ್ಜಿಕಲ್ ವಿಭಾಗದಲ್ಲಿ ಸುಟ್ಟ ಗಾಯದ ಆರೈಕೆ ಒ೦ದು ಸವಾಲಿನ ಕೆಲಸ. ಸುಟ್ಟಗಾಯಗಳು ಬಹಳವಾಗಿ ಗ್ರಾಮೀಣ ಪ್ರದೇಶದಲ್ಲೇ ಬಡಕುಟುಂಬಗಳಲ್ಲಿ ಕಾಣಿಸಿಕೊಳ್ಳುತ್ತದೆ ಸಾಮಾನ್ಯವಾಗಿ ಜ್ವಾಲೆಗಳಿಂದ ದಲ್ಲದೇ ಬಿಸಿ ದ್ರವ ಎಲೆಕ್ಟ್ರಿಕ್ ಶಾಕ್ ನಿಂದ ಸುಡುವಿಕೆಯು ಇರುತ್ತದೆ ಅಲ್ಲದೆ ಸೀಮೆಎಣ್ಣೆ ಒಲೆ ಅಥವಾ ದೀಪಗಳಿಂದ ಆಗುವ ಅನಾಹುತ.
ಮೂಲಭೂತ ಚಿಕಿತ್ಸೆಯೆಂದರೆ ಸುಟ್ಟ ಗಾಯದ ಆರೈಕೆ ಇದು ಕೇವಲ ಒಬ್ಬ ವ್ಯಕ್ತಿ ಅಥವಾ ಡಾಕ್ಟರ್ ನಿಂದ ಆಗುವ ಅರಕೆಲ್ಲ ಸುಟ್ಟಗಾಯದ 1 ಪ್ಲಾಸ್ಟಿಕ್ ಸರ್ಜರಿ ಟೀಮ್/ ತ೦ಡದಿ೦ದಲೇ ಆಗಬೇಕು ಹಾಗೂ ಒ೦ದು ಪರಿಪೂರ್ಣ ಬರ್ನ್ ಕೇರ್ (ಸುಟ್ಟಗಾಯದ ಆರೈಕೆ ಕೇಂದ್ರ) ದಲ್ಲೇ ಆಗುವ ಆರೈಕೆ.
ಇದರಲ್ಲಿ ಪ್ಲಾಸ್ಟಿಕ್ ಸರ್ಜನ್ ಜತೆಗೆ ಅನುಭವವುಳ್ಳ ನರ್ಸ್ ಫಿಸ್ಕಲ್ ಮತ್ತು ದ್ಯೋಗಿಕ ಚಿಕಿತ್ಸಕರು , ಪೋಷಣೆ ಚಿಕಿತ್ಸಕರು ಮನೋವೈದ್ಯರು ಇರುತ್ತಾರೆ. ಪ್ರಾಸ್ಟಿಕ್ ಸರ್ಜನ್ನರ ಕೆಲಸ ಈ ಆರೈಕೆಯಲ್ಲಿ ಬಹಳ ಮುಖ್ಯ.
ಮೊದಲು ಸುಟ್ಟಗಾಯದ ವ್ಯಕ್ತಿಯ ಪ್ರತಿಶತ ರೋಗ ನಿರ್ಣಯ ಪ್ರಾರ್ಥಮಿಕ ಪುನರುಜ್ಜೀವನ, ದೀರ್ಘಕಾಲದ ಭವಿಷ್ಯದ ಸಮಸ್ಯೆಗಳ ಚಿಕಿತ್ಸೆ ಈ ಎಲ್ಲವೂ ಪ್ಲಾಸ್ಟಿಕ್ ಸರ್ಜನ್ ರ ಮೇಲೆ ನಿರ್ಧಾರವಾಗುತ್ತದೆ.
ಆದ್ದರಿಂದ ಯಾವುದೇ ಸುಟ್ಟ ಗಾಯದ ವ್ಯಕ್ತಿಯೂ ಮೊದಲು ಪ್ಲಾಸ್ಟಿಕ್ ಸರ್ಜನ್ ಭೇಟಿ ಮಾಡುವುದು ಸೂಕ್ತ ಮತ್ತು ಪ್ಲಾಸ್ಟಿಕ್ ಸರ್ಜನ್ ನಿರ್ಧಾರ ರೋಗಿಯ ಜೀವನದ ಮೇಲೆ ಬಹಳ ಪರಿಣಾಮ ಬೀರುವುದು ಖಚಿತ.
ರಿಕನ್ ಸ್ಟ್ರಕ್ಟಿವ್ / ಮರುಜೋಡಣೆ ವಿಭಾಗ:
ಎಲ್ಲರಿಗೂ ಗೊತ್ತಿರುವಂತೆ ಮರುಜೋಡಣಾ ಕ್ರಿಯೆ ಅಥವಾ ಮರುರೂಪಿಸುವ ಕ್ರಿಯೆಯಲ್ಲಿ ಮನುಷ್ಯನು ಕಳೆದುಕೊಂಡ ಆಕಾರ ಹಾಗೂ ವಿರೂಪ ಗತಿಯನ್ನು ಮಾರ್ಪಡಿಸುವ ಕೆಲಸ ಕೆಲಸವೇ ಸರ್ಜರಿಯಾಗಿದ್ದು ಇದರಲ್ಲಿ ಮಗುವಿನ ಸೀಳು ತುಟಿಯನ್ನು ಸಾಮಾನ್ಯವಾಗಿ ದೇವರು ರೂಪಿಸುವ ಹಾಗೆ ಮಾಡಲಾಗುವುದು. ಇದರಿಂದ ಮಗುವಿಗೆ ಮಾತನಾಡಲು ಹಾಗೂ ನುಂಗಲು ಹಾಗೂ ಮುಖದ ಅಂದ ರೂಪಿಸುವ ಪ್ಲಾಸ್ಟಿಕ್ ಸರ್ಜರಿ ಆಗಿರುತ್ತದೆ.
ಓಂಕಾಪ್ಲಾಸ್ಟಿಕ / ಬಾಯಿ ಕ್ಯಾನ್ಸರ್ ಮರುರೂಪಿಸುವ ವಿಭಾಗ:
ಇದೇ ತರಹ ಬಾಯಿಯ ಹುಣ್ಣು ಕ್ಯಾನ್ಸರ್ ಚಿಕಿತ್ಸೆಯ ದೋಷಗಳನ್ನೂ ನ್ಯೂನತೆಗಳನ್ನು ಬಹಳ ಸೂಕ್ಷ್ಮವಾಗಿ ಮರು ರೂಪಿಸುವ ಕಲೆ ಪ್ಲಾಸ್ಟಿಕ್ ಸರ್ಜನ್ ಇದರಲ್ಲಿ ಕ್ಯಾನ್ಸರ್ ಭಾಗವನ್ನು ತೆಗೆದ ನಂತರ ಉಳಿದ ನ್ಯೂನತೆಗಳಿಗೆ ಅನುಸಾರವಾಗಿ ಅದರ ಅಳತೆಯದ್ದು ತೊಡೆಯ ಚರ್ಮದಿಂದ ಸರಿಪಡಿಸುವ ಸರ್ಜನರಿಗೆ ಕ್ಯಾನ್ಸರ್ ವಸ್ಕ್ಯೂಲರ್ ಸರ್ಜರಿ ಎನ್ನಲಾಗುತ್ತದೆ. ಅದೇ ರೀತಿ ಅಪಘಾತದಿಂದ ಗಾಯಗೊಂಡ ಕಾಲಿನ ಮರುಜೋಡಣಾ ಸರ್ಜರಿಯನ್ನು ಓರ್ಥೋ ಪ್ಲಾಸ್ಟಿಕ್ ಸರ್ಜರಿ ಎಂದು ಕರೆಯುತ್ತಾರೆ.
ಇವುಗಳು ಪ್ಲಾಸ್ಟಿಕ್ ಸರ್ಜರಿಯ ವಿಭಾಗಗಳಾಗಿವೆ ಅಲ್ಲದೇ ಕುತ್ತಿಗೆಯ ಕೆಳಗಿನ ಭಾಗಗಳಲ್ಲಿರುವ ನರಗಳ ಗಾಯದಿಂದ ಆಗೋ ದೋಷ ಅಂದರೆ ಬ್ರೆಕಿಯಲ್ ಪ್ಲೆಕ್ಸಸ್ ಗಾಯ ಸರಿಪಡಿಸುವ ಸರ್ಜರಿ ಮೈಕ್ರೋ ನ್ಯೂರೋ (ನರ) ರಿಕನ್ ಸ್ಟ್ರಕ್ಟಿವ್ ಸರ್ಜರಿ ಎನ್ನುತ್ತಾರೆ. ಇವೆಲ್ಲ ವಿಭಾಗಗಳು ಪ್ರಾಸ್ಟಿಕ್ ಸರ್ಜರಿ ಎಂಬ ಮುಖ್ಯ ವಿಭಾಗದಲ್ಲಿ ಬರುವ ಉಪವಿಭಾಗ ಗಳಾಗಿರುತ್ತವೆ.
ಸಾಮಾನ್ಯ ಜನರ ಅರಿವಿಗೆ ಪ್ಲಾಸ್ಟಿಕ್ ಸರ್ಜರಿ ಅಂದರೆ ಮನುಷ್ಯನ ಯಾವುದೇ ರೂಪ ಅಥವಾ ದೋಷ ಅಥವಾ ಜನ್ಮಜಾತ ವಿಕಾರತೆ ಕೂದಲಿನಿಂದ ಹಿಡಿದು ಉಗುರಿನ ವಿಕಾರವನ್ನು ಪೂರ್ಣ ಕಾರ್ಯ ಮಾಡುವ ಹಾಗೆ ಸರಿಪಡಿಸುವ ಮರುರೂಪಿಸುವ ಸೌಂದರ್ಯವರ್ಧಕದ ಒ೦ದು ಮುಖ್ಯವಾದ ವೈದ್ಯ ಶಾಖೆಯಾಗಿದೆ.
ಕಾಸ್ಮೆಟಿಕ್ / ಕಾಂತಿವರ್ಧಕ ವಿಭಾಗ :
ಇದು ಇತ್ತೀಚಿನ ದಿನಗಳಲ್ಲಿ ಬಹಳ ಮುಂದುವರಿದ ವಿಭಾಗವಾಗಿದ್ದು ಮುಖದ ಸೌಂದರ್ಯವನ್ನು ಹೆಚ್ಚಿಸುವ ವಿಭಾಗ ಸಾಮಾನ್ಯ ಜನರ ನಂಬಿಕೆ ಅಂದರೆ ಕಾಸ್ಮೆಟಿಕ್ ಸರ್ಜರಿ ಕೇವಲ ಮುಖದ ಅಂದ ಹೆಚ್ಚಿಸುವ ಸರ್ಜರಿ ಆದರೆ ಈ ವಿಭಾಗದಲ್ಲಿ ಬೇರೆ ತರಹದ ಸರ್ಜರಿ ಗಳೂ ಇವೆ ಕೊಬ್ಬು ತೆಗೆಯುವ ಸರ್ಜರಿ ಹೊಟ್ಟೆಯ ಕೊಬ್ಬು ತೆಗೆಯುವುದು ದೇಹದ ಆಕಾರ ರಚಿಸುವುದು ಆಕಾರ ಮರುರೂಪಿಸುವುದು ಸ್ತನ ವಿನ್ಯಾಸ ದೇಹದಲ್ಲಿ ಕೊಬ್ಬಿನ ವಿಕಾರತೆಯ ವಿನ್ಯಾಸ ಇವುಗಳನ್ನು ಹೊಂದಿರುತ್ತದೆ.
ಕಳೆದ 2 ದಶಕಗಳಿಂದ ಕಾಸ್ಮೆಟಿಕ್ ಸರ್ಜರಿಗಳು ಹೆಚ್ಚುತ್ತಿವೆ ಮೀಡಿಯಾಗಳ ಪ್ರಚಾರದಿಂದ ಜನರು ಕಾಸ್ಮೆಟಿಕ್ ಸರ್ಜರಿ ಪಡೆಯುತ್ತಿದ್ದಾರೆ ಇದರಿಂದ ಒಬ್ಬ ವ್ಯಕ್ತಿಯ ಕಾಳಜಿ ಹಾಗೂ ಪರಿಪೂರ್ಣತೆ ಹೆಚ್ಚುತ್ತದೆ. ಯುವ ಪೀಳಿಗೆ ಕಾಸ್ಮೆಟಿಕ್ ಚಿಕಿತ್ಸೆಯನ್ನು ಹೆಚ್ಚೆಚ್ಚು ಪಡೆಯುತ್ತಿದ್ದಾರೆ ಇದು ಅವರ ಸೌಂದರ್ಯವನ್ನು ವೃದ್ಧಿಸುವದಲ್ಲದೆ ಯೋಗಕ್ಷೇಮ ಕಾಪಾಡಿಕೊಳ್ಳುವುದು ಮತ್ತು ಯಾವುದೇ ಅಪಾಯ ಇಲ್ಲದೆ ಮಾಡುವಂಥ ಸರ್ಜರಿಯಾಗಿದೆ.
ಒ೦ದು ಮಗುವಿನ ಸೀಳುತುಟಿ ಸಮಾಜದಲ್ಲಿ ಅಸಹಜ ಎನ್ನಿಸಬಹುದು ಆದ್ದರಿಂದ ಸೀಳುತುಟಿ ಮರುರೂಪಿಸುವ ಸರ್ಜರಿ ಬೇಕಾಗುತ್ತದೆ ಅದೇ ತರಹ ಒಬ್ಬ ಮನುಷ್ಯನ ದೊಡ್ಡ ಮೂಗಿನ ವಿಕಾರತೆ ಮೂಗು ಸಮಾಜದಲ್ಲಿ ಅಸಹಜವಾಗಿ ಕಾಣುತ್ತದೆ ಅವರಿಗೆಲ್ಲ ಇದು ಅನುಕೂಲಕರವಾಗಿದೆ.
ಅದೇ ತರಹ ಕೆಲ ವ್ಯಕ್ತಿಗಳು ತಮ್ಮ ಮೈಕಟ್ಟು ವಿನ್ಯಾಸದ ಬಗ್ಗೆ ಚಿಂತಿತರಾಗುತ್ತಾರೆ ಅದರ ಮುಖ ದೇಹ ಲಕ್ಷಣದ ಬಗ್ಗೆ ಇತರರಿಂದ ನಿಂದನೆಗೆ ಒಳಗಾಗ ಬೇಕಾಗುತ್ತದೆ.
ಗೈನಕೋಮಾಸ್ಟಿಯಾವು ಹದಿಹರೆಯದ ಗಂಡು ಮಕ್ಕಳಲ್ಲಿ ಕಂಡುಬರುವ 1ಅಸಹಜ ಲಕ್ಷಣ ಇದು ಯಾವುದೇ ರೋಗ ಅಲ್ಲದಿದ್ದರೂ ವ್ಯಕ್ತಿಗೆ ಮಾನಸಿಕ ತೊಂದರೆ ಕೊಡುವ ಸ್ಥಿತಿ ಇಂಥ ಸಮಸ್ಯೆಗಳಿಗೆ ಪ್ಲಾಸ್ಟಿಕ್ ಸರ್ಜರಿ ಸೂಕ್ತ.
ಆದರೆ ಪ್ಲಾಸ್ಟಿಕ್ ಸರ್ಜರಿ ಲಾಭ ನಷ್ಟಗಳ ಸಮತೋಲನ ಕಾಯ್ದುಕೊಳ್ಳಬೇಕು ಪ್ಲಾಸ್ಟಿಕ್ ಸರ್ಜರಿಯಿಂದ ಎಲ್ಲ ಸಮಸ್ಯೆಗಳು ಬಗೆಹರಿಯುತ್ತದೆ ಎಂದು ತಿಳಿಯುವುದು ತಪ್ಪು ಇದರ ಬಗ್ಗೆ ಪ್ರಾಯೋಗಿಕವಾಗಿ ಯೋಚಿಸಬೇಕೇ ಹೊರತು ಪ್ಲಾಸ್ಟಿಕ್ ಸರ್ಜರಿಗೆ ಪರಿಪೂರ್ಣ ಎಂದು ಭಾವಿಸಬಾರದು.
ಡಾ. ಅರುಣ್ ಕುಮಾರ ಜೀಡಿ
ಪ್ಲಾಸ್ಱಿಕ್ ಸರ್ಜನ
ರಿಕಾನ್ ಪ್ಲಾಸ್ಟಿಕ್ ಸರ್ಜರಿ ಕ್ಲಿನಿಕ್
2 ನೇ ಮಹಡಿ ಮಾರ್ವೆಲ್ ಸಿಗ್ನೆಟ್ , ವಿದ್ಯಾನಗರ, ಹುಬ್ಬಳ್ಳಿ
ಮೊ: 9599854449
https://www.doctorvisionmagazine.in/home/doctor/49/arunkumar-jeedi
Share: